BOMBE HELUTAITE SONG LYRICS – RAAJAKUMARA MOVIE
KANNADA
BOMBE HELUTAITE SONG LYRICS – RAAJAKUMARA MOVIE KANNADA
Raajakumara is a 2017 Kannada language movie directed by
Santhosh Ananddram. Bombe Helutaite song from this Puneeth Rajkumar, Priya
Anand, and Prakash Raj starrer Raajakumara, is composed by the music director V
Harikrishna. Santosh Ananddram has provided the Lyrics for this song.
Movie : Raajakumara
Song Title : Bombe Helutaite
Movie Director : Santhosh Ananddram
Music Director : V Harikrishna
Singer(s) : Vijay Prakash
Lyrics By : Santosh Ananddram
Bombe Helutaite Song Lyrics in Kannada
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ
ಹೊಸಬೆಳಕೊಂದೂ
ಹೊಸಿಲಿಗೆ ಬಂದೂ
ಬೆಳಗಿದೆ ನಮ್ಮಾ
ಮನಗಳ ಇಂದೂ
ಆರಾಧಿಸೋ ರಾರಾಜಿಸೋ
ರಾಜರತ್ನನು
ಆಡಿಸಿಯೇ ನೋಡು
ಬೀಳಿಸಿಯೇ ನೋಡು
ಎಂದೂ ಸೋಲದು
ಸೋತು ತಲೆಯ
ಬಾಗದು
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ
ಗುಡಿಸಲೇ ಆಗಲಿ
ಅರಮನೆ ಆಗಲಿ
ಆಟವು ನಿಲ್ಲದು
ಎಂದೂ ಆಟ
ನಿಲ್ಲದು
ಹಿರಿಯರೇ ಇರಲಿ
ಕಿರಿಯರೆ ಬರಲಿ
ಬೇಧವ ತೋರದು
ಎಂದೂ ಬೇಧ
ತೋರದು
ಎಲ್ಲ ಇದ್ದು
ಏನೂ ಇಲ್ಲದ
ಹಾಗೆ ಬದುಕಿರುವ
ಆಕಾಶ ನೋಡದ
ಕೈಯೇ ನಿನದು
ಪ್ರೀತಿ ಹಂಚಿರುವ
ಜೊತೆಗಿರೆ ನೀನೂ
ಅಪ್ಪನ ಹಾಗೆ
ಹಣ್ಣೆಲೆ ಕಾಯೋ
ವಿನಯದಿ ಹೀಗೆ
ನಿನ್ನನು ಪಡೆದ
ನಾವು ಪುನೀತ
ಬಾಳು ನಗುನಗುತಾ
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ
ತಾನೇ ಉರಿದು
ಮನೆಗೆ ಬೆಳಕು
ಕೊಡುವಾ ದೀಪವಿದು
ನಂದಾ ದೀಪವೇ
ಇದು
ಆಡಿಸುವಾತನ ಕರುಣೆಯ
ಮೇಲೆ ನಮ್ಮಾ
ಪಾತ್ರವು
ಸಮಯದ ಸೂತ್ರ
ಅವನದು
ಒಂದು ಮುತ್ತಿನ
ಕಥೆಯ ಹೇಳಿತು
ಈ ಬೊಂಬೆ
ಆ ಕಥೆಯಲ್ಲಿಲ್ಲದ
ರಾಜನ್ಹ ಂಗೆ
ನೀನು ಬಂದೆ
ಯೋಗವು ಒಮ್ಮೆ
ಬರುವುದು ನಮಗೆ
ಯೋಗ್ಯತೆ ಒಂದೇ
ಉಳಿವುದು ಕೊನೆಗೆ
ಸೂರ್ಯನೊಬ್ಬ ಚಂದ್ರನೊಬ್ಬ
ರಾಜನೂ ಒಬ್ಬ
ಈ ರಾಜನು
ಒಬ್ಬ
ಆಡಿಸಿಯೇ ನೋಡು
ಬೀಳಿಸಿಯೇ ನೋಡು
ಎಂದು ಸೋಲದು
ಸೋತು ತಲೆಯ
ಬಾಗದು
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ.