ಬಾಳು ಕಲಿಸಿದ ಸಲಹೆಗಾರ
ಬೆರಗು ಮೂಡಿಸೊ ಜಾದೂಗಾರ ಅಪ್ಪಾ
ಹಗಲು ಬೆವರಿನ ಕೂಲಿಕಾರ
ರಾತ್ರಿ ಮನೆಯಲಿ ಚೌಕಿದಾರ
ಎಲ್ಲ ಕೊಡಿಸುವ ಸಾಹುಕಾರ ಅಪ್ಪಾ
ಗದರೊ ಮೀಸೆಕಾರ
ಮನಸೇ ಕೋಮಲ
ನಿನ್ನ ಹೋಲೊ ಕರ್ಣ ಯಾರಿಲ್ಲ
ಅಪ್ಪಾ ಐ ಲವ್ ಯೂ ಪ
ಅಪ್ಪಾ ಐ ಲವ್ ಯೂ ಪ
ಅಪ್ಪಾ ಐ ಲವ್ ಯೂ ಪ
ಅಪ್ಪಾ ಐ ಲವ್ ಯೂ ಪ
ನಾನು ನೋಡಿದ ಮೊದಲ ವೀರ
ಬಾಳು ಕಳಿಸಿದ ಸಲಹೆಗಾರ
ಬೆರಗು ಮೂಡಿಸೊ ಜಾದೂಗಾರ ಅಪ್ಪಾ
ಬೆರಳನು ಹಿಡಿದರೆ
ವಿಶ್ವಾಸವೂ ಬೆಳೆವುದು
ಹೆಗಲಲಿ ಕುಳಿತರೆ
ಕುತೂಹಲ ತಣಿವುದು
ನಾನು ಓದೋ ಪಾಠದಲಿ
ಅದು ಯಾಕೆ ನಿನ್ನ ಹೆಸರಿಲ್ಲ
ನಿನ್ನ ಹಾಗೆ ಯಾಕೆ ಯಾರಿಲ್ಲ
ನೀನು ಇರುವ ಧೈರ್ಯದಲಿ
ಯಾರೊಂದಿಗೂ ನಾ ಸೋಲಲ್ಲ
ನಿನ್ನ ಪ್ರೀತಿ ಮುಂದೆ ಏನಿಲ್ಲ
ಅಪ್ಪಾ ಐ ಲವ್ ಯೂ ಪ
ಅಪ್ಪಾ ಐ ಲವ್ ಯೂ ಪ
ಅಪ್ಪಾ ಐ ಲವ್ ಯೂ ಪ
ಅಪ್ಪಾ ಐ ಲವ್ ಯೂ ಪ
ನಿನ್ನ ಅಂಗಿ ಬೆವರಲಿ
ನಮ್ಮ ಅನ್ನ ಅಡಗಿದೆ
ಮಗಳೆ ಅನ್ನೋ ಮಾತಿನಲಿ
ನಿನ್ನ ಮಮತೆ ತಿಳಿದಿದೆ
ತಾಯಿ ಮಾತ್ರ ತವರಲ್ಲ
ತಂದೆ ಇರದೆ ತಾಯಿಲ್ಲ
ಆಕಾಶದಂತೆ ನಿನ್ನ ಮನಸಪ್ಪ
ನಾನು ಎಂದು ಹೇಳಿಲ್ಲ
ಯಾಕಂತ ನನಗೂ ತಿಳಿದಿಲ್ಲ
ನೀನು ಅಂದ್ರೆ ಅಚ್ಚುಮೆಚ್ಚಪ್ಪ
ಅಪ್ಪಾ ಐ ಲವ್ ಯೂ ಪ
ಅಪ್ಪಾ ಐ ಲವ್ ಯೂ ಪ
ಅಪ್ಪಾ ಐ ಲವ್ ಯೂ ಪ
ಅಪ್ಪಾ ಐ ಲವ್ ಯೂ ಪ
ಎಲ್ಲ ಕೊಡಿಸುವ ಸಾಹುಕಾರ ಅಪ್ಪಾ